Sunday, January 30, 2011

ನೀವೇ ಉತ್ತರಿಸಿ!!

"ಎಲ್ಲಿದೆ ವಾಜಪೇಯಿಯವರ ಆದರ್ಶ?"
-ಇದು ಇಂದು ಕರ್ನಾಟಕ ಕಾಂಗ್ರೆಸ್ ನ ರಾಜ್ಯಾಧ್ಯಕ್ಶರಾಗಿರುವ ಪರಮೇಶ್ವರಪ್ಪನವರಾಡಿದ ಮಾತು.ವಾಜಪೇಯಿಯವರ ಕಾಲ ಕೆಳಗೆ ನೂರಲು ಯೋಗ್ಯತೆಯಿಲ್ಲದ ಹೊಲಸು ಕಾಂಗ್ರೆಸ್ ಮುಖಂಡರುಗಳಿಗೆ ಇನ್ನು ವಾಜಪೇಯಿಯವರ ಹೆಸರೆತ್ತಲು ಏನೇನೂ ಅಧಿಕಾರವಿಲ್ಲ. ೬೮ ವರ್ಷಗಳ ಹಿಂದೆ ಇದೇ ದಿನ ನಿಧನರಾದ ಗಾಂಧೀಜಿಯವರಿಗೆ ಪುಷ್ಪವೃಷ್ಟಿ ಸುರಿಸಿ ಕಂಬಳಿಹುಳುವಿನಂತಿರುವ ತನ್ನ ೪ ಇಂಚು ಹುರಿಮೀಸೆಯಡಿಯಲ್ಲಿ ಮಾತನಾಡಿದ ಪರಮೇಶ್ವರಪ್ಪನವರಿಗೆ ಗೌರವ ಡಾಕ್ಟರೇಟು ನೀಡಲೇಬೇಕು!!.ಎಪ್ಲಿಕೇಶನ್ ಸಲ್ಲಿಸಲು ಹೊರಡಲಿ.
      ಇಂತಹ ಮೂರ್ಖ ರಾಜಕಾರಣಿಗಳು ನಮ್ಮ ದೇಶಕ್ಕಂಟಿದ ಸಾಂಕ್ರಾಮಿಕ ರೋಗರುಜಿನಗಳು.ಇವರನ್ನು ಸಂಪೂರ್ಣವಾಗಿ ನಾಶ ಮಾಡದೇ ಇದ್ದಲ್ಲಿ ನಮ್ಮ ದೇಶವನ್ನು ನಾಶ ಮಾಡುತ್ತಾರೆ.ಹೆಂಡತಿ ಮಕ್ಕಳನ್ನು ನೋಡಿಕೊಳ್ಳಲು ಬಾರದ ಇವರಿಗೆ ಇನ್ನು ಮುಖ್ಯಮಂತ್ರಿಯಾಗುವ ಕನಸು!.
      ಯಾರಿಗೆ ಏನು ಯೋಗ್ಯತೆಯಿದೆಯೋ ಅದಕ್ಕೆ ತಕ್ಕಂತೆ ಜನಸಾಮಾನ್ಯರು ಆರಿಸಿ ಕಳುಹಿಸುತ್ತಾರೆ.ಸಿಕ್ಕಿದ ಸ್ಥಾನಕ್ಕೆ ಮರ್ಯಾದೆ ಕೊಟ್ಟು ಕೆಲಸ ಮಾಡಲಿ.ಇಲ್ಲದಿದ್ದರೆ ಮನೆಯಲ್ಲಿ ಕುಳಿತು ಹೆಂಡತಿಗೆ ಅಡುಗೆಗೆ ಸಹಾಯ ಮಾಡಲಿ. 

Wednesday, January 19, 2011

ಕುಡುಕರ ಸಾಮ್ರಾಜ್ಯದಲ್ಲಿ ..


      ಇಂದು ನಮ್ಮ ದೇಶಕ್ಕೆ ಅರ್ಧಕ್ಕಿ೦ತಲೂ ಹೆಚ್ಚಿನ ತೆರಿಗೆ ಆದಾಯ ಅಬಕಾರಿ ಇಲಾಖೆಯ ಮೂಲಕ ಸಂದಾಯವಾಗುತ್ತಿದೆ ಒಟ್ಟಿಗೆ ಇಲಾಖೆಯ ಅಧಿಕಾರಿಗಳ ಮೇಜಿನ ಡ್ರವರ್ ಸಹ ಭರ್ತಿಯಾಗಿ ಸಮಳುತ್ತಿದೆ.ಆದರೆ ಈ ಸಾರಾಯಿಯ ಸಹವಾಸ ಮಾಡಿದ ಹಲವರು ತಮ್ಮ ಮನೆಯ ದಿಕ್ಕನ್ನು ಮರೆತು ರೋಡಿನಲ್ಲಿ,ರಸ್ತೆ ಬದಿಯ ಚರಂಡಿಯಲ್ಲಿ ಇನ್ನೆಲ್ಲೆಲ್ಲೋ ಬಿದ್ದು ಹೊರಲಾದಿಕೊಂಡಿರುತ್ತಾರೆ. ಹೆಂಡತಿ ,ಮಕ್ಕಳು ತಮ್ಮ ಗಂಡ ,ತಂದೆಯನ್ನು ಹುಡುಕಿಕೊಂಡು ಹೊರಡುತ್ತಾರೆ.ಇವರಿಂದ ನಮ್ಮ ದೇಶ ಉದ್ದಾರವಾಗುತ್ತಿದೆ ಎನ್ನಬಹುದೇ?
    ಕುಲ ಗೆಟ್ಟ ರಾಜಕಾರಣಿಗಳ ಪ್ರಮುಖ ಆದಾಯವು ಸಹ ಇದರಿಂದಲೇ.ಆದ್ದರಿಂದ ಇವರಿಂದ ನಾವು ಏನನ್ನೂ ನಿರೀಕ್ಷಿಸಲಾಗದು.ಏಕೆಂದರೆ ಅವರೂ ತಮ್ಮ ಕುಟುಂಬದ ಹತ್ತು ತಲೆಮಾರಿಗಾಗುವಷ್ಟು ಅಕ್ರಮ ಸಂಪಾದನೆಯನ್ನು ಮಾಡುತ್ತಾರೆಯೇ ಹೊರತು ಬೇರೇನೂ ಮಾಡುವುದಿಲ್ಲ.
     ಆದರೆ ನಮ್ಮ ನಾರಿಯರು ಸಹ "ನಾವು ಸಹ ಪುರುಷರಷ್ಟೇ ಸಮರ್ಥರು" ಎಂಬುದನ್ನು ಕುಡಿಯುವುದರ ಮೂಲಕವೂ ನಿರೂಪಿಸಲು ಹೊರಟಿರುವುದು ಆಘಾತಕಾರಿ ವಿಚಾರ.ಏಕೆಂದರೆ ಯಶಸ್ವೀ ಪುರುಷನ ಹಿಂದೆ ಮಹಿಳೆಯ ಕೈ ಇರುತ್ತದೆ ಎಂಬ ಮಾತಿಗೆ ಇಂದು ಅರ್ಥ ವಿಲ್ಲದಂತಾಗಿದೆ.ಆದರೆ ನಿಜವಾದ ವಿಚಾರವೇ ಬೇರೆ.ಓರ್ವ ಯಶಸ್ವಿಯಾಗಿರುವ ಪುರುಷನ ಹಿಂದೆ ಮಹಿಳೆ ಹೋಗುತ್ತಾಳೆ,ಇರಲಿ.ಅದು ಬೇರೆ ವಿಚಾರ.
     ಒಟ್ಟಿನಲ್ಲಿ ಇಂದಿನ ಯುವಜನತೆ ಕುಡಿದು ಹಾದಿ ತಪ್ಪುತ್ತಿದ್ದಾರೆ.ಸಂಸ್ಕೃತಿಯ ಬಗ್ಗೆ ಜಗತ್ತಿಗೆ ದಾರಿದೀಪವಾಗಿರುವ ಭವ್ಯ ಸಂಸ್ಕೃತಿಯ ಪರಂಪರೆ ಹೊಂದಿರುವ ನಮ್ಮ ದೇಶದ ಸಂಸ್ಕೃತಿಯ ಅಳಿವು-ಉಳಿವು ಇಂದಿನ ಯುವಜನಾಂಗದ ಮೇಲೆ ಅವಲಂಬಿತವಾಗಿದೆ.
ಕವಿವಾಣಿಯಂತೆ,
 ಕಟ್ಟುವೆವು ನಾವು ಹೊಸ ನಾಡೊಂದನು
 ರಸದ ಬೀಡೊಂದನು.
ಹೊಸ ನೆತ್ತರುಕ್ಕುಕ್ಕಿ ಆರಿ ಹೋಗುವ ಮುನ್ನ
ಹರೆಯದೀ ಮಾಂತ್ರಿಕನ ಮಾಟ ಮಸಳುವ ಮುನ್ನ
ಉತ್ಸಾಹ ಸಾಹಸದ ಉತ್ತುಂಗ ವೀಚಿಗಳ
ಈ ಕ್ಶುಬ್ದ ಸಾಗರವು ಬತ್ತಿ ಹೋಗುವ ಮುನ್ನ
ಕಟ್ಟುವೆವು ಹೊಸ ನಾಡೊಂದನು
ಸುಖದ  ಬೀಡೊಂದನು.
ಈ ಕವಿವಾಣಿಗೆ ನಾವೆಲ್ಲ ಕಂಕಣ ಬದ್ದರಾಗೋಣ.ನೀವೆಲ್ಲ ಏನಂತೀರಿ?
                                                                                                           


  ಚಿತ್ರ ಕೃಪೆ,ಕೆಮರಾ:ಅದ್ನಾನ್
   ಸಹಾಯ:ಅಜೇಯ
               ಅನೀಶ್


Sunday, January 16, 2011

ದಗಲ್ ಬಾಜಿ....

ಭಾರತ ರಾಮರಾಜ್ಯವಾಗಬೇಕು
ಎಂದಿದ್ದರು
ಮಹಾತ್ಮಾ ಗಾಂಧೀಜಿ;
ಆದರೆ ಇಂದಿನ
ರಾಜಕಾರಣಿಗಳು
ಆಗಿದ್ದಾರೆ ಬರೇ
ದಗಲ್ ಬಾಜಿ....

Thursday, January 13, 2011

ಸವಿ ಸವಿ ನೆನಪು....

ಈ ಘಟನೆ ನಡೆದದ್ದು ಸುಮಾರು ೮ ವರ್ಷಗಳ ಹಿಂದೆ.
ನಾನು ೭ನೇ ತರಗತಿ ಮುಗಿಸಿ ೮ನೇ ಪ್ರವೇಶಿಸುವಾಗ ದೇವಭಾಷೆಯಾದ ಸಂಸ್ಕೃತ ಅಥವಾ ರಾಷ್ಟ್ರಭಾಷೆಯಾದ ಹಿಂದಿಯನ್ನು ಆಯ್ಕೆ ಮಾಡಬೇಕಾಗಿತ್ತು.ನಾನು ಸಂಸ್ಕೃತ ಭಾಷೆಯನ್ನು ಆಯ್ಕೆ ಮಾಡಿಕೊಂಡೆ.ಏಕೆಂದರೆ ನನಗೆ ಹಿಂದಿ ಭಾಷೆ ೫ನೇ ತರಗತಿಯಿಂದಲೀ ಸ್ವಲ್ಪ ಕಷ್ಟವಾಗುತ್ತಿತ್ತು ಹಾಗೂ ನನ್ನ ಮೂವರೂ ಅಕ್ಕಂದಿರೂ ಸಹ ಸಂಸ್ಕೃತವನ್ನೇ ಆಯ್ಕೆ ಮಾಡಿಕೊಂಡಿದ್ದರು.೧ ತಿಂಗಳ ಬಳಿಕ ತರಗತಿ ಪ್ರಾರಂಭವಾಯಿತು.ವಿದ್ಯಾಭ್ಯಾಸವೂ ಸರಾಗವಾಗಿ ಮುಂದುವರೆಯಿತು.
ನಮ್ಮ ಸಂಸ್ಕೃತ ಉಪನ್ಯಾಸಕರು ಪಿ.ಗೋವಿಂದ ಭಟ್ಟರು.ಬಹಳ ಮೇಧಾವಿ. ಅವರ ಸಂಸ್ಕೃತ ವ್ಯಾಕರಣವೆಂದರೆ ಬಹಳ ಉತ್ತಮವಾಗಿತ್ತೆಂದು ಅಕ್ಕಂದಿರು ಹೇಳುತ್ತಿದ್ದರು.ಅದೊಂದು ಶನಿವಾರ ನನಗೆ ತೀವ್ರವಾದ ಜ್ವರ ಬಂದಿತ್ತು.ಶನಿವಾರವಾಗಿದ್ದ ಕಾರಣ ಮೈಸೂರಿನಲ್ಲಿ ಆಯುರ್ವೇದ ಕಲಿಯುತ್ತಿದ್ದ ಚೇತಕ್ಕ(ಚೇತನಾ) ಹಾಗೂ ಉಕ್ಕ(ಉಷಾ) ಬಂದಿದ್ದರು.ನಾನು ಶಾಲೆಗೇ ಹೋಗುತ್ತೆನೆಂದರೂ ಸಹ ಬೈಗುಳಗಳ ಮಳೆಯನ್ನು ಸುರಿಸಿ  ಇಡೀ ದಿನ ಹಾಸಿಗೆ ಬಿಟ್ಟು ಏಳದಂತೆ ಮಾಡಿದ್ದರು .ಅದೇ ಶನಿವಾರ ನಮ್ಮ ಸಂಸ್ಕೃತ ಉಪನ್ಯಾಸಕರು ವ್ಯಾಕರಣ ವಿಷಯವಾಗಿ ಪಾಠ ಮಾಡಿದ್ದರು ಎಂಬುದನ್ನು ನನ್ನ ಬಾಲ್ಯ(ಬಾಲ) ಸ್ನೇಹಿತ ಅಜೇಯನ ಮೂಲಕ ಕೇಳಿ ತಿಳಿದುಕೊಂಡೆ.ಆದರೆ ವ್ಯಾಕರಣ ಕಲಿಯುವ ಗೋಜಿಗೆ ಹೋಗಲಿಲ್ಲ.ಏಕೆಂದರೆ ಆಗ ನನಗೆ ವ್ಯಾಕರಣದ ಮಹತ್ವ ತಿಳಿದಿರಲಿಲ್ಲ.
ಜುಲೈ ತಿಂಗಳ ಕೊನೆಗೆ ನಮಗೆ ಕಿರು ಪರೀಕ್ಷೆಯ ಸಂಭ್ರಮ.ಪರೀಕ್ಷೆಗಳು ಮುಗಿದ ಬಳಿಕ ಮನೆಯಲ್ಲಿ ಮಾಮೂಲಿ ಪ್ರಶ್ನೆ,
"ಪರೀಕ್ಷೆ ಹೇನ್ಗಿತ್ತು?"
ಧ್ವನಿ ಸುರುಳಿ ಹಾಕಿದಂತೆ ಉತ್ತರ "ಸುಲಭ ಇತ್ತು".
ಬಳಿಕ ೪ ದಿವಸಗಳ ಕಾಲ ಆಟ ಊಟ ಇತ್ಯಾದಿ.ಪಾಠಗಳನ್ನು  ಓದಲೇ ಇಲ್ಲ.೫ನೇ ದಿನ ಅಮ್ಮನ ಮುಖದಲ್ಲಿ ಎಂದೂ ಕಾಣದಂತಹ ರೂಪ.ಕಾರಣವೇನೆಂದು ಕೇಳಿದಾಗ,
"ಸಂಸ್ಕೃತ ಪರೀಕ್ಷೆ ಹೇನ್ಗಿತ್ತು?"
"ಸುಲಭ ಇತ್ತು"-ನನ್ನ ಉತ್ತರ.
ಮುಂದಿನದು ಸುಮಾರು ಅರ್ಧ ಘಂಟೆಗಳ ಕಾಲ ಅಮ್ಮನ ಬಾಯಿಯಿಂದ ಗುಡುಗು-ಸಿಡಿಲು ಗಳು,ಸಾಲದೆಂಬಂತೆ ಮೊದಲೇ ಮಳೆಗಾಲ.ಅದರೊಡನೆ ತಾಯಿಯ ಕಣ್ಣಿಂದ ಗಂಗೆಯು ಅವತರಿಸಿದ್ದಳು.ಬಳಿಕ ಅಮ್ಮ ಹೇಳಿದರು.ನನಗೆ ಸಂಸ್ಕೃತ ಪರೀಕ್ಷೆಯಲ್ಲಿ ದೊರೆತ ಅಂಕಗಳು ೨೫ರಲ್ಲಿ ೦೮ ಎಂಬುದಾಗಿ ಉಪನ್ಯಾಸಕರು ಹೇಳಿದ್ದರಂತೆ.ನಾನಾದರೋ "೦೮ ಆಗಿರ ೧೮ ಆದಿಕ್ಕು.ಸುಮ್ಮನೆ ಗೊಂತಿಲ್ಲದ್ದೆ ಬೊಬ್ಬೆ ಹಾಕೆಡ" ಎಂದು ವಿಶ್ವಾಸದಲ್ಲಿ ನುಡಿದೆ.ಅಮ್ಮನೂ ಸಹ "ಆದಿಕ್ಕು.ಮಾಷ್ಟ್ರಿನ್ಗೆ ತಪ್ಪಿದ್ದಾದಿಕ್ಕು"ಎಂದರು ಖಾರವಾಗಿ,ವ್ಯಂಗ್ಯವಾಗಿ.
೧ ವಾರ ಕಳೆದು ಪರೀಕ್ಷೆಯ ಉತ್ತರ ಪತ್ರಿಕೆಗಳು ದೊರೆತವು.ಸಂಸ್ಕೃತ ಯ್ತ್ತರ ಪತ್ರಿಕೆಗಳನ್ನು ಒಂದೊಂದಾಗಿ  ಬಹುಮಾನ ವಿತರಿಸಿದಂತೆ  ವಿತರಿಸಿದರು."ಶ್ರೀಕೃಷ್ಣ.ಪಿ.ಐ" ಎಂದಾಗ ನಾನು "ಜೈ" ಎಂಬ ಉದ್ಗಾರದೊಂದಿಗೆ ಸಂತೋಷದಿಂದ  ಹೋಗಿ ಇಣುಕಿ ನೋಡಿದಾಗ ಅಂಕಗಳು ೨೫ರಲ್ಲಿ ೦೮!!ಅಮ್ಮನಿಗೆ ಉಪನ್ಯಾಸಕರು ಹೇಳಿದ ವಿಷಯ ಸತ್ಯವಾಗಿತ್ತು.ಬಳಿಕ ಉಪನ್ಯಾಸಕರು ನನ್ನ ಒಳ್ಳೆಯದಕ್ಕಾಗಿ ಮನಸ್ಸಿಗೆ ನಾಟುವಂತಹ ಕೆಲವು ಮಾತುಗಳನ್ನು ಹೇಳಿದರು."ಹಾ!ಶ್ರೀಕೃಷ್ಣ.ನೀನು ಕಲಿಯುವುದರಲ್ಲಿ ಇಷ್ಟು ದಡ್ಡ ಎಂದು ಗೊತ್ತಿದ್ದರೆ ನಾನು ನಿನ್ನಲ್ಲಿ ಸಂಸ್ಕೃತ ಆರಿಸಿಕೊ ಎಂದು ಹೇಳುತ್ತಿರಲಿಲ್ಲ.ನಿನ್ನ ಅಕ್ಕಂದಿರು ನನ್ನ ವಿದ್ಯಾರ್ಥಿನಿಯರೇ.ಅವರು ಕಲಿಯುವುದರಲ್ಲಿ ಮುಂದಿದ್ದರು.ನೀನೇಕೆ ಹೀಗೆ?"ಎಂದಿದ್ದರು .ಬಹಳ ಬೇಸರವಾಯಿತು .ಬಳಿಕ ಸಂಸ್ಕೃತ ವ್ಯಾಕರಣವನ್ನು ಕೊನೆಯ ಅಕ್ಕ ಅಪ್ಪು(ಅಪರ್ಣಾ) ವಿನ ಬಳಿ ಕೇಳಿ ತಿಳಿದುಕೊಂಡೆ.'ಲಕಾರ'ಗಳನ್ನು ಉರು ಹೊಡೆದೆ.ಬಳಿಕ ನಡೆದ ೨ನೆ ಕಿರು ಪರೀಕ್ಷೆಯಲ್ಲಿ 25 ರಲ್ಲಿ ೧೭.೫ ಅಂಕಗಳು,ಅಂದರೆ ೧೦೦ ರಲ್ಲಿ ೭೦ ಅಂಕಗಳು ದೊರೆತವು.ಆಗ ಉಪನ್ಯಾಸಕರು "ಹಾ!ಶ್ರೀಕೃಷ್ಣ.ಕಲಿಯುವುದರಲ್ಲಿ ಮುಂದಿದ್ದಾನೆ ಎಂಬುದನ್ನು ತೋರಿಸಿಕೊಟ್ಟಿದ್ದಾನೆ "ಎಂದಾಗ ಖುಷಿಯಾಯಿತು . ಬಳಿಕ ನಡೆದ ಪರೀಕ್ಷೆಗಳಲ್ಲಿ ೮೦-೯೦ ಅಂಕಗಳು ದೊರೆತವು.೧೦ ನೆ ತರಗತಿಯಲ್ಲಿ ನಡೆದ ಮಧ್ಯಾವಧಿ ಪರೀಕ್ಷೆಯಲ್ಲಿ ೧೦೦ ರಲ್ಲಿ ೯೮ ಅಂಕಗಳು,ತರಗತಿಗೆ ಪ್ರಥಮನಾಗಿದ್ದೆ ಎಂಬ ನೆನಪು.
ಇನ್ನು ಪಿ.ಯು .ಸಿ ಯಲ್ಲಿ ಮಾಡಿದ ಕಪಿಚೇಷ್ಟೆಯ ಸುದ್ದಿ.ನಾನು,ಗೋವಿಂದರಾಜ ,ಕೌಶಿಕ್  last bench students .ಅಜೇಯ ನಂತಹ ಅನುಭವಿಗಳು,ಸೀತಾರಾಮ ನಂತಹ ಸೀನ್ತ್ರಿಗಳು ನಮ್ಮ ಮುಂದಿನ bench ನಲ್ಲಿ.ಇನ್ನು ಯಾರು ನಂಬದಂತಹ ಮೂಢನಂಬಿಕೆ ಗಳನ್ನು ಹೊತ್ತ ದಿಲೀಪ ನಂತಹವರು ಎದುರಿನ bench ನಲ್ಲಿ.ನಾನು,ಗೋವಿಂದ,ಕೌಶಿಕ್ ಉಪನ್ಯಾಸಕರು ತರಗತಿಗೆ ಪ್ರವೇಶಿಸಿದ ಬಳಿಕ ಪ್ರವೆಶಿಸುವವರು.ಆದ್ರೂ ಉಪನ್ಯಾಸಕರೇನೂ  ಹೇಳುತ್ತಿರಲಿಲ್ಲ.ಏಕೆಂದರೆ ಯಾರಿಗೂ ಉತ್ತರ ಗೊತ್ತಿರದಿದ್ದರೆ ಕೊನೆಗೆ ನಮ್ಮಲ್ಲಿ ಯಾರಾದರೂ ಒಬ್ಬ ಉತ್ತರ ನೀಡುತ್ತಿದ್ದ ಕಾರಣ ಮೌನವಾಗಿದ್ದರು. ನಮ್ಮಂತಹ ಉಪದ್ರ ಕೇಡಿಗಳು ಇನ್ನೊಬ್ಬರು ಇರಲಾರರೋ ಏನೋ !!ಇಂತಹ ಉಪದ್ರಗಳನ್ನು ತಡೆಯದ ನಮ್ಮ ಪ್ರೀತಿಯ ಉಪನ್ಯಾಸಕರು ಗೋವಿಂದನಲ್ಲಿ "ನೀನು ಕೃಷ್ಣ ನ ಬಳಿ ಕುಳಿತುಕೊಳ್ಳಬಾರದು" ಎಂಬುದಾಗಿ ತಿಳಿಸಿದ್ದರಂತೆ.ಇದನ್ನು ನನಗೆ ಹೇಳಿದ ಗೋವಿಂದನಲ್ಲಿ ಗೋವಿಂದರಾಜ ,ಕೌಶಿಕ್  ಬೇರೆ ಕುಳಿತುಕೊಳ್ಳಲು ಹೇಳಿ ನಾನು ಒಬ್ಬನೇ last bench student ಆಗಿ ಉಳಿದುಕೊಂಡೆ.ಈ ಬಾರಿ ಪ್ರತಿಯೋರ್ವನೂ ಮೌನವಾಗಿದ್ದರು.ಉಪನ್ಯಾಸಕರು ಕೇಳುವ ಯಾವ ಪ್ರಶ್ನೆಗಳಿಗೂ ಉತ್ತರ ನೀಡುತ್ತಿರಲಿಲ್ಲ.ಇದನ್ನರಿತ ಉಪನ್ಯಾಸಕರು ನನ್ನನ್ನು ಉಪನ್ಯಾಸಕರ ಕೊಠಡಿ ಗೆ ಬರಲು ಆಮಂತ್ರಣ ನೀಡಿದರು.ಬಳಿಕ ಅಲ್ಲಿ ಸ್ವಲ್ಪ ವಿದ್ಯಾರ್ಥಿ ಉಪದೇಶ ನೀಡಿದರು.ಬಳಿಕ ಎಂದಿನಂತೆನಾನು,ಗೋವಿಂದರಾಜ ,ಕೌಶಿಕ್  last bench students ಆದೆವು.ಸಾಲದೆಂಬಂತೆ ಹುಡುಗಿಯರನ್ನು ಚುಡಾಯಿಸಲಾರಮ್ಭಿಸಿದೆವು.ಅದನ್ನು ಅರಿತೋ ಏನೋ,ಇಂದಿಗೂ ನನ್ನಲ್ಲಿ ಪಿ.ಯು .ಸಿ ಯಾ ಕೆಲವು ಸ್ನೇಹಿತೆಯರು ಪೇಟೆಯಲ್ಲಿ ಸಿಕ್ಕರೆ ಮುಖ ತಿರುಗಿಸಿಕೊಂಡು ಹೋಗುತ್ತಾರೆ.ಅವರಲ್ಲಿ ಈ ಮೂಲಕ ನಾನು ಕ್ಷಮೆ ಕೇಳುತ್ತಿದ್ದೇನೆ.ನಮ್ಮ ಕಪಿಚೇಷ್ಟೆ ಈ ರೀತಿ ಮುಂದುವರೆಯಲು ದ್ವಿತೀಯ ಪಿ.ಯು.ಸಿ ಯ ಕೊನೆ ಬಂದೇ ಬಿಟ್ಟಿತು.ಉಪನ್ಯಾಸಕರು ಭಾರವಾದ ಹ್ರದಯದೊಂದಿಗೆ  ತರಗತಿಯಲ್ಲಿದ್ದ ಎಲ್ಲಾ ವಿದ್ಯಾರ್ಥಿ ಗಳಿಗೆ montex -high power ಪೆನ್ನನ್ನು ನೀಡಿ ಶುಭ ಹಾರೈಸಿ ಹೊರಟು ಹೋದರು.ಅವರ ಕಣ್ಣು ಆರ್ದ್ರವಾಗಿತ್ತು. ಜೊತೆಗೆ ನಮ್ಮ ಕಣ್ಣೂ ಸಹ.
ಮರ ಮುಪ್ಪಾಗಿದ್ದರೆ ಏನಂತೆ?ಅದರ ಹಣ್ಣಿನ ಸಿಹಿ ಮುಪ್ಪಾಗಲಾರದು.
ನೆನಪುಗಳು ಹಾಗೆಯೇ.ಪುಟವಿಟ್ಟ ಚಿನ್ನದಂತೆ.ನೆನಪಾದಾಗ ಕಣ್ಣನ್ನು ತೋಯಿಸಿ ಹೃದಯವನ್ನು ಭಾರವನ್ನಾಗಿಸಿ ಕಣ್ಣ ನೀರ ಹನಿಯು ಕೆನ್ನೆಯ ಮೇಲೆ ಹರಿದುಹೋಗಿಸುತ್ತದೆ ತನಗರಿವಿಲ್ಲದಂತೆ.

Wednesday, January 12, 2011

ಹುಚ್ಚುನಾಯಿಗಳು......

                 ನಮ್ಮ ಇಂದಿನ ವಿಧಾನಸಭೆಯ ಕಲಾಪ ನೋಡಿದ ಬಹುತೇಕ ಮಂದಿ ಇನ್ನು ಮುಂದೆ ಮತ ಕೇಳಲು ಬರುವ ರಾಜಕಾರಣಿಗಳಿಗೆ ಚಪ್ಪಲಿಯೇಟು ಕೊಟ್ಟಾರು ಎನ್ನುವ ಆಶಾ ಭಾವನೆ ನನ್ನದು.ಏಕೆಂದರೆ ನಮ್ಮಿಂದ ಚುನಾಯಿತಗೊಂಡ ಓರ್ವ ವಿಪಕ್ಷ ಸದಸ್ಯ ದಾಸಯ್ಯನಂತೆ ಜಾಗಟೆ ಹೆಟ್ಟುತ್ತಾ  ದಾಸಯ್ಯನಿಗೆ ಅವಮಾನ ಮಾಡಲು ಹೊರಟಿದ್ದಾನೆ.ಇವನಿಗೆ ಗೌರವ ತೆಗೆದುಕೊಳ್ಳುವ ಯೋಗ್ಯತೆವಿಲ್ಲವಾದ್ದರಿಂದ ಆತನಿಗೆ ಏಕ ವಚನವೇ ಸೂಕ್ತ. ಇನ್ನು ವಿಪಕ್ಷ ಸದಸ್ಯರು ಆಡಳಿತ ಪಕ್ಷಕ್ಕೆ ಏನೂ ಮಾತನಾಡಲು ಅವಕಾಶ ನೀಡದೆ ವಿಧಾನಸಭೆಯ ಬಾವಿ ಗಿಳಿದು ಪ್ರತಿಭಟನೆ ನಡೆಸಿದರು.ಬಹುಷಃ ,ವಿಧಾನಸಭೆಯ ಬಾವಿಯ ಬದಲು ಬೇರೆ ಯಾವುದಾದರೂ ಬಾವಿ ನೋಡಿಕೊಳ್ಳುತ್ತಿದ್ದರೆ ರಾಜಕೀಯಕ್ಕೆ ಬರಬೇಕೆನ್ದುಕೊಂಡಿದ್ದ ಯುವಕರಿಗೆ ಸ್ಥಾನ ಸಿಗುತ್ತಿತ್ತು.
                    ಇಂತಹ ರಾಜಕಾರಣಿಗಳು ನಮ್ಮನ್ನು ಆಳುತ್ತಿದ್ದಾರೆ ಎನ್ನಲು ನನಗೆ ನಾಚಿಕೆಯಾಗುತ್ತಿದೆ.ಬಹುಷಃ ನಿಮಗೂ ಆಗಬಹುದು.ಇಂತಹ ರಾಜಕಾರಣಿಗಳು ನಮಗೆ ಬೇಕಾ?ಅಟಲ್ ಬಿಹಾರಿ ವಾಜಪೇಯಿ ,ನರೇಂದ್ರ ಮೋದಿ ಯಂತಹ ಅದೆಷ್ಟೋ ಧೀಮಂತ ನಾಯಕರುಗಳು ಆಳಿದ್ದ ಆಳುತ್ತಿರುವ ದೇಶ ನಮ್ಮದು.ವಿಷಯ ಇಂತಿರಬೇಕಾದರೆ ಕರ್ನಾಟಕದಲ್ಲಿ ಕಾಂಗ್ರೆಸ್, ಜೆ ಡಿ ಎಸ್ ನಂತಹ ಹುಚ್ಚುನಾಯಿ ರಾಜಕಾರಣಿಗಳು ಆಡಳಿತ ಪಕ್ಷಕ್ಕೆ ಅವಕಾಶ ನೀಡುತ್ತಿಲ್ಲ..ಆದ್ದರಿಂದ ಮುಂಬರುವ ಚುನಾವಣೆಗಳಲ್ಲಿ ಯಾವುದಾದರು ಒಂದೇ ಪಕ್ಷ ಆಡಳಿತದ ಚುಕ್ಕಾಣಿ ಹಿಡಿಯುವಂತೆ ಮಾಡುವುದು ನಮ್ಮ ಕೆಲಸ.ಉಳಿದ "ಹುಚ್ಚುನಾಯಿ"ಗಳನ್ನು ಹಿಡಿದು ಬೋನಿಗೆ ಹಾಕುವುದು ನಮ್ಮ ನಿಮ್ಮೆಲ್ಲರ ಕೆಲಸ.ಏನಂತೀರಿ?

Sunday, January 9, 2011

IPL season....3kaasina aatagaararu!!!

           ನಮ್ಮ ದೇಶ ಶುರು ಮಾಡಿದ ಐ ಪಿ ಎಲ್ ಕ್ರಿಕೆಟ್ ಇಂದು ಮಗ್ಗುಲು ಮಲಗಲು ತಿಳಿಯದ ಮಗುವೂ ಸಹ ಉಚ್ಚೆ ಹೊಯ್ಯಲು ಮರೆತು ಕ್ರಿಕೆಟ್ ಆಟ ವನ್ನು ನೋಡುವಂತೆ ಮಾಡುತ್ತಿದೆ.ಇದು ತಪ್ಪಲ್ಲ.ಆದರೆ ೨ ದಿನಗಳ ಹಿಂದೆ ನಡೆದ 'ಹರಾಜಿ'ನಲ್ಲಿ  'ಹರಾಜಾ'ಗಾದೆ  ತಮ್ಮ "ಮಾನ ಹರಾಜು" ಮಾಡಿಕೊಂಡಿರುವ ಆಟಗಾರರ ಬಗ್ಗೆ ಅನುಕಂಪದ ನಡುವೆಯೂ ಫ್ರಾಂಚೈಸಿ ಗಳ ವಿರುದ್ಧ ಸಿಟ್ಟು ಬರುತ್ತಿದೆ.  
           IPL  AUCTION -೪ ನಲ್ಲಿ ಹರಾಜಾಗದೆ ಉಳಿದಿರುವ ಭಾರತೀಯ ಕ್ರಿಕೆಟ್ ತಂಡದ ಯಶಸ್ವಿ ಮಾಜಿ ನಾಯಕ ಸೌರವ್ ಗಂಗೂಲಿ,ಟೆಸ್ಟ್ ಕ್ರಿಕೆಟ್ ನ ಇನ್ನಿಂಗ್ಸ್ ವೊಂದರಲ್ಲಿ ಇಂದಿನವರೆಗೆ ಅಳಿಸಲಾಗದ ದಾಖಲೆಯಾಗಿ ಉಳಿದಿರುವ  ೪೦೦ ರನ್ ಗಳಿಸಿರುವ ಎಡಚ ಬ್ರಿಯಾನ್ ಲಾರಾ,ತಲೆಗೆ ಮುಂಡಾಸು ಕಟ್ಟಿ ಅದರ ಮೇಲೆ ಹೆಲ್ಮೆಟ್ ಇಟ್ಟು ಆಡುವ ಸಿಡಿಲಬ್ಬರದ ದಾಂಡಿಗ ಕ್ರಿಸ್ ಗೈಲ್ ಮುಂತಾದ ತಾರಾ ಆಟಗಾರರು ಹರಾಜಾಗದೆ ಇರುವುದರ ಬಗ್ಗೆ ಪ್ರತಿಯೋರ್ವ ಕ್ರಿಕೆಟ್ ಅಭಿಮಾನಿಯೂ ಸಹ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾನೆ.ಇದು ತಾರಾ ಕ್ರಿಕೆಟ್ ಆಟಗಾರರಿಗೆ ನಾದುವ ಅವಮಾನವಲ್ಲದೆ ಮತ್ತೇನು?
          ನಿಜವಾಗಿಯೂ ದೇಶದ ಹಿತದೃಷ್ಟಿಯಿಂದ ನೋಡುವುದಿದ್ದರೆ ಈ ಕ್ರಿಕೆಟ್ ಆಟಗಾರರ ಹರಾಜು ಪ್ರಕ್ರಿಯೆ,I P L ಗಳೆಲ್ಲಾ ಅಗತ್ಯವಿತ್ತೆ?ಅದೆಷ್ಟೋ ಜನ ಹೊಟ್ಟೆಗೆ ಹಿಟ್ಟಿಲ್ಲದೆ,ಉಡಲು ವಸ್ತ್ರವಿಲ್ಲದೆ ವಾಸಿಸಲು ವಸತಿಯಿಲ್ಲದೆ ಅಲೆಮಾರಿಗಳಂತೆ ಅಲೆದಾಡುತ್ತಿದ್ದಾರೆ.ಆದ್ರೆ ಬೆಂಗಳೂರಲ್ಲಿ 3ಕಾಸಿಗೆ ಆಟಗಾರರ ಹರಾಜು! ಇದೆಲ್ಲಾ ಅಗತ್ಯವಿತ್ತೇ?

ನನ್ನವಳು..

ನನ್ನವಳು ಕಿರಿಯುವಾಗ
ಹಲ್ಲು..
ನೆನಪಾಗುವುದು ನನಗೆ
ಆಕಳು
ತಿನ್ನುವ ಹುಲ್ಲು.

Saturday, January 8, 2011

"ರಾಜಕೀಯ 'ಸನ್ಯಾಸ'"....

ರೆಡ್ಡಿಗಳ ಅಕ್ರಮ ಗಣಿಗಾರಿಕೆ ವಿರುದ್ಧವಾಗಿ ಸುಪ್ರೀಂಕೋರ್ಟ್ ನೇಮಿಸಿರುವ ಸಿ ಇ ಸಿ ಸಮಿತಿಯ ವರದಿಯೇನೋ ಸ್ವಾಗತಾರ್ಹ ವಿಚಾರ.ಆದರೆ ಪ್ರತಿಪಕ್ಷಗಳ ನಾಯಕರ ಉವಾಚ ಮಾತ್ರ ಅತ್ಯಂತ ಹಾಸ್ಯಾಸ್ಪದವಾಗಿದೆ.ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯನವರ ಪ್ರಕಾರ ಅವರು ನಡೆಸಿದ "ಪಾದಯಾತ್ರೆ"ಯ ಫಲವಾಗಿ ಸಮಿತಿಯು ರೆಡ್ಡಿಗಳ ಅಕ್ರಮ ಗಣಿಗಾರಿಕೆ ವಿರುದ್ಧ ವರದಿ ನೀಡಿದೆ.ಆದ್ದರಿಂದ ಆಡಳಿತ ಪಕ್ಷದ ನಾಯಕರೆಲ್ಲರೂ ರಾಜಿನಾಮೆ ನೀಡಬೇಕು ಎಂದಿದ್ದಾರೆ.
ಓ....ಸಿದ್ಧರಾಮಯ್ಯನವರೇ,
               ದಯವಿಟ್ಟು ಸುಪ್ರೀಂಕೋರ್ಟ್ ನ ಅಂತಿಮ ತೀರ್ಪು ಬರುವವರೆಗೆ ಕಾದು ನೋಡಿ.ಬಳಿಕ ತೀರ್ಪು ನಿಮ್ಮ ಪರವಾಗಿದ್ದರೆ ಇನ್ನೊಮ್ಮೆ ರಾಜ್ಯಾದ್ಯಂತ "ಪಾದಯಾತ್ರೆ" ಮಾಡಿ.ಅಲ್ಲಿವರೆಗೆ ಸರಕಾರ ಮಾಡುವ ಉತ್ತಮ ಕಾರ್ಯಗಳನ್ನು ಪ್ರೋತ್ಸಾಹಿಸಿ,ಎಡವಿದಲ್ಲಿ ತಿಳಿಹೇಳಿ ಜನರ ಮನ ಗೆಲ್ಲಲು ಪ್ರಯತ್ನಿಸಿ.ಇದೂ ಸಾಧ್ಯವಾಗದಿದ್ದರೆ ನೀವೂ ಸಹಿತವಾಗಿ ಮಣ್ಣಿನ ಮುದ್ದೆ ದೇವೇಗೌಡ,ಮರದಿಂದ ಮರಕ್ಕೆ ಹಾರುವ ಮಂಗನಂತೆ ಪಕ್ಷದಿಂದ ಪಕ್ಷಕ್ಕೆ ಹಾರಿದ ಬಂಗಾರಪ್ಪ,ಆಡಳಿತ ದ ಅವಧಿ ಮುಗಿದ ಮೇಲೆ ಜನತೆ ತಿರಸ್ಕರಿಸಿದರೆ ಯಡಿಯೂರಪ್ಪ ಎಲ್ಲರೂ "ರಾಜಕೀಯ 'ಸನ್ಯಾಸ'" ತೆಗೆದುಕೊಂಡು ಮನೆಯಲ್ಲಿ ಕುಳಿತು ರಾಮಜಪ ಮಾಡಿ.ಯುವಕರಿಗೆ ರಾಜಕೀಯದಲ್ಲಿ ಅವಕಾಶಿ ನೀಡಿ.

Friday, January 7, 2011

ರಾಮರಾಜ್ಯವಾಗಬೇಕಾದರೆ....

೧.ದೇಶದಲ್ಲಿರುವ ಎಲ್ಲಾ ರಾಜ್ಯಗಳನ್ನು ಕಿತ್ತೊಗೆದು ಅಖಂಡ ಭಾರತದ ನಿರ್ಮಾಣವಾಗಬೇಕು.
೨.ದೇಶದಲ್ಲಿರುವ ಎಲ್ಲಾ ರಾಜಕೀಯ ಪಕ್ಷಗಳನ್ನು ಕಿತ್ತೊಗೆದು ದೇಶಕ್ಕೊಂದೆ ಆಡಳಿತವಿರುವ ಪಕ್ಷರಹಿತ ಸರಕಾರದ  ಸ್ಥಾಪನೆಯಾಗಬೇಕು.
೩.ಮೀಸಲಾತಿ ಎಂಬುದು ಸೈನಿಕರಿಗೆ,ಅಂಗವಿಕಲರಿಗೆ,ಹಾಗೂ ಆರ್ಥಿಕವಾಗಿ ತೀರ ಹಿಂದುಳಿದವರಿಗೆ ಮಾತ್ರ ಮೀಸಲಾಗಿಡಬೇಕು. ೪.ಸರಕಾರವು ಸಾರ್ವಜನಿಕರಿಗೆ ಬೇಕಾಗಿರುವಂತಹ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೇ ಹೊರತು ಧಾರ್ಮಿಕ ವಿಷಯಗಳಲ್ಲಿ ಧಕ್ಕೆ ತರುವಂತಹ ಕಾರ್ಯಚಟುವಟಿಕಗಳಲ್ಲಿ ಭಾಗವಹಿಸಬಾರದು.
೫.ಕುರುಡಾಗಿ ಪಾಶ್ಚಾತ್ಯ ಶಿಕ್ಷಣದ ಕಹಿ ಅನುಭವಿಸುವ ಬದಲಾಗಿ ದೇಶಕ್ಕೊಪ್ಪುವ ಶಿಕ್ಷಣದ ಸಿಹಿ ಅನುಭವಿಸುವಂತಾಗಬೇಕು. ೬.ದೇಶದಲ್ಲಿ "ಸಹಕಾರ" ತತ್ವದಡಿಯಲ್ಲಿ ಸಂಘ ಸಂಸ್ಥೆಗಳು ಕಾರ್ಯ ನಿರ್ವಹಿಸಬೇಕು.
೭.ಮಿಲಿಟರಿ,ಟಂಕಸಾಲೆ ಯಂತಹ ಕೆಲವೊಂದು ಅಧಿಕಾರಗಳು ಮಾತ್ರ ಸರಕಾರದ ಅಧೀನದಲ್ಲಿರಬೇಕು.

ಮಹಾತ್ಮೆ

ರಾಜಕಾರಣಿಗಳು 
ಜನರಲ್ಲಿ ಕೇಳುವರು ಓಟು;
ಬಳಿಕ ಬಣ್ಣ
ಬಯಲಾಗದಂತೆ 
ಹಾಕಿಕೊಳ್ಳುವರು ಕೋಟು

ಮಹಾತ್ಮೆ

ರಾಜಕಾರಣಿಗಳು  ಜನರಲ್ಲಿ
ಕೇಳುವರು ಓಟು;
ಬಳಿಕ ಬಣ್ಣ
ಬಯಲಾಗದಂತೆ
ಹಾಕಿಕೊಳ್ಳುವರು ಕೋಟು..

Thursday, January 6, 2011

ಪ್ರೀತಿ

ಸಾಗರದ ಕಿನಾರೆಯಲ್ಲಿ
ಬರೆದಿಹ ಪ್ರೇಮ ಪಲ್ಲವಿಯ
ನೀರ ಅಲೆ ಅಳಿಸಬಹುದು.
ಹೃದಯದಲ್ಲಿ ಹೆಮ್ಮರವಾಗಿ
ಬೆಳೆದಿಹ ಪ್ರೀತಿಗೆ ಕೊಡಲಿ
ಏಟು ಹಾಕಲು ಸಾಧ್ಯವೇ?