Saturday, April 23, 2011

ತೊಟ್ಟಿಲು ತೂಗುತ್ತಿರುವ "ಕುಮಾರ"

ಅಯ್ಯೋ..ಕರ್ನಾಟಕದಲ್ಲಿ ಅದೆಷ್ಟು ರಾಜಕೀಯ ನಾಯಕರುಗಳು ಮಹಿಳೆಯರೊಡನೆ ಅಕ್ರಮ ಸಂಬಂಧ ಕುದುರಿಸಿ ಮನೆಯಲ್ಲಿ ತೊಟ್ಟಿಲು ತೂಗುತ್ತಿದ್ದಾರೋ..? ಆ ದೇವನೇ ಬಲ್ಲ.
ದಕ್ಷಿಣ ಕನ್ನಡ ಜಿಲ್ಲೆಯ ಸಾಲೆತ್ತೂರು ಗ್ರಾಮದ "ಪೊಣ್ಣು" ರಾಧಿಕಾಳೊಡನೆ "ವ್ಯವಹಾರ" ಕುದುರಿಸಿ ಮನೆಯಲ್ಲಿ ತೊಟ್ಟಿಲು ಕಟ್ಟಲು ವ್ಯವಸ್ಥೆ ಮಾಡಿದ ವ್ಯಕ್ತಿಯೆಂದರೆ ಅದು ಈ ದೇಶದ "ಮಣ್ಣಿನ ಮಗ(ಮುದ್ದೆ)" ಎಂದು ಕೊಚ್ಚಿಕೊಳ್ಳುತ್ತಿರುವ ದೇಶದ ಮಾಜಿ ಪ್ರಧಾನ ಮಂತ್ರಿ ಯಾಗಿದ್ದ ಹೆಚ್.ಡಿ. ದೇವೇಗೌಡನ ಸುಪುತ್ರ ಹೆಚ್.ಡಿ ಕುಮಾರಸ್ವಾಮಿ.ಅನಿತಾಳೊಡನೆ ಚೊಕ್ಕವಾಗಿ ಬಾಳಲು ತಿಳಿಯದ ಇಂತಹ ಹೊಲಸು ನಾಯಕರು ಇನ್ನು ನಮ್ಮನ್ನು ಆಳತೊಡಗಿದರೆ ಅದೆಷ್ಟು ಮನೆಯಲ್ಲಿ ತೊಟ್ಟಿಲು ಕಟ್ಟಬೇಕಾದೀತೋ ಏನೋ?..
ಆತ್ಮೀಯ ಪ್ರಜಾಪ್ರಭುಗಳೆ,
    ನನ್ನದೊಂದು ವಿನಂತಿ.ಮುಂದಿನ ಬಾರಿ ಚುನಾವಣೆಗೆ ಮತ ಕೇಳಲು ಮನೆ ಮನೆಗೆ ಬಂದಾಗ ಇಂತಹವರನ್ನು ಜಾಡಿಸಿ ಒದ್ದು ಓಡಿಸಿ.ಮುಂದೆ ಇಂತಹವರು ರಾಜಕೀಯದಲ್ಲಿ ಮುಖವನ್ನು ತೂರಬಾರದು.ಅದೆಷ್ಟು ಮಂದಿ ಯುವಕ-ಯುವತಿಯರು ನಿಷ್ಕಲ್ಮಶವಾಗಿ ಜನರ ಸೇವೆ ಮಾಡಲು ಹಾತೊರೆಯುತ್ತಿದ್ದಾರೋ ಏನೋ?ಅಂತಹವರನ್ನು ಚುನಾವಣೆಯಲ್ಲಿ ನಿಲ್ಲಿಸಿ ಬಹುಮತದಿಂದ ಗೆಲ್ಲಿಸಿ.ದೇಶವನ್ನು ಇಂತಹ ಕಾಮುಕರಿಂದ ರಕ್ಷಿಸಿ
                      ||ಭಾರತ್ ಮಾತಾ ಕೀ ಜೈ||
                          ||ಜೈ ಹಿಂದ್||

Monday, April 4, 2011

ಈ ಬಿ.ಡಿ.ಎ ನಿವೇಶನ ಯಡಿಯೂರಪ್ಪನ ಅಪ್ಪನ ಮನೆಯ ಗಂಟೇ?

ಇದು ನೋಡಿ ರಾಜಕೀಯ ಅಂದ್ರೆ..
 ಕರ್ನಾಟಕ ರಾಜ್ಯದಲ್ಲಿ ಅದೆ‍ಷ್ಟೋ ಮಂದಿ ಹೊಟ್ಟೆಗೆ ಹಿಟ್ಟಿಲ್ಲದೆ,ಮೈ ಮುಚ್ಚಲು ಬಟ್ಟೆಯಿಲ್ಲದೆ,ನೆಲೆಯೂರಲು ವಾಸ್ತವ್ಯದ ಮನೆಯಿಲ್ಲದೆ ಅಲೆಮಾರಿಗಳಂತೆ ಬಸ್ ಸ್ಟ್ಯಾಂಡಿನಲ್ಲೋ,ದೇವಸ್ಥಾನಗಳಲ್ಲೋ ಇನ್ನೂ ಎಲ್ಲೆಲ್ಲೋ ದಿನಕಳೆಯುತ್ತಿರುತ್ತಾರೆ. ಪಾಪ,ಅವರಿಗೆ ಗೊತ್ತೇ ಇರುವುದಿಲ್ಲ ಮರುದಿನ ನಮಗೆ ಬೆಳಿಗ್ಗೆಯಾಗುವುದೋ ಇಲ್ಲವೋ ಎನ್ನುವ ವಿಷಯ.ಇದಕ್ಕೆ ಮುಖ್ಯ ಕಾರಣವೆಂದರೆ ಅಭಿವೃದ್ಧಿ ಎನ್ನುವ ನೆಪದಲ್ಲಿ ಎಸ್.ಇ.ಝಡ್ ಮುಖಾಂತರ ರೈತರ ಹಚ್ಚ ಹಸುರಾಗಿದ್ದ ಭೂಮಿಯನ್ನು ಈ ಕುಲಗೆಟ್ಟ ರಾಜಕಾರಣಿಗಳು "ನುಂಗಿದ್ದು".
 ಅದೇನೇ ಇರಲಿ.ಮೊನ್ನೆ ಎಪ್ರಿಲ್ 2 ರಂದು ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಐ.ಸಿ.ಸಿ ಮುಖಾಂತರ ಸುಮಾರು 14 ಕೋಟಿ,ಹುಂದೈ ಅವರಿಂದ ಬೆಲೆಬಾಳುವ,ಇನ್ನೂ ಮಾರುಕಟ್ಟೆಗೆ ಬಿಡುಗಡೆಯಾಗದ verna ಕಾರು,ಇಂಡಿಕಾ ಸಂಸ್ಥೆಯಿಂದ ಇನ್ನೊಂದು ಕಾರು, ದೆಹಲಿ ಸರಕಾರದಿಂದ ಆಟಗಾರರಿಗೆ, ಕೋಚ್,ಸಿಬ್ಬಂದಿ ವರ್ಗದವರಿಗೆ,ಆಯ್ಕೆ ಸಮಿತಿಯ ಸದಸ್ಯರಿಗೆ ಹೆಣಭಾರದಷ್ಟು ಹಣ.......ಇನ್ನೂ ಏನೇನೋ ಇದೆ. ಸಾಲದೆಂಬಂತೆ ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪನವರು ಎಲ್ಲಾ ಆಟಗಾರರಿಗೆ ಬಿ.ಡಿ.ಎ ನಿವೇಶನ ಕೊಡಲು ಹೊರಟಿದ್ದಾರೆ.? ಈ ಬಿ.ಡಿ.ಎ ನಿವೇಶನ ಯಡಿಯೂರಪ್ಪನ ಅಪ್ಪನ ಮನೆಯ ಗಂಟೇ?.ಕಾಮನ್ವೆಲ್ತ್ ನಲ್ಲಿ ಉತ್ತಮ ಸಾಧನೆ ಮಾಡಿದ ವಾಸ್ತವ್ಯಕ್ಕೆ ಯೋಗ್ಯವಲ್ಲದ ಮನೆಗಳಲ್ಲಿ ವಾಸಿಸುವ ಕರ್ನಾಟಕದ ಕ್ರೀಡಾಪಟುಗಳಿಗೆ ಇನ್ನೂ ನೀಡದ ನಿವೇಶನ ಈ ಆಟಗಾರರಿಗೆ ಅಗತ್ಯವಿತ್ತೇ?
ದೇಶವೇ ಹೆಮ್ಮೆ ಪಡುವಂತಹ ಸಾಧನೆ ಕ್ರಿಕೆಟ್ ಆಟಗಾರರು ಮಾಡಿದ್ದಾರೆ,ನಿಜ.ಕೋಟಿಗಟ್ಟಲೆ ಹಣ,ಅದೆಷ್ಟೋ ಬೆಲೆಬಾಳುವ ಕಾರುಗಳು,ಹಲವು ಕಡೆ ನಿವೇಶನಗಳು ಇರಬೇಕಾದರೆ ವಾಸ್ತವ್ಯಕ್ಕೆ ಮನೆಯಿಲ್ಲದ ಅದೆಷ್ಟೋ ಮಂದಿ ಹೊರಗಡೆ ಅಲೆಯುತ್ತಿರಬೇಕಾದರೆ,ಇರುವ ಸಣ್ಣ ಮನೆಯನ್ನು ಸರಕಾರ ಕೆಡವುತ್ತಿರಬೇಕಾದರೆ ಈ ಆಟಗಾರರಿಗೆ ಇಂತಹ ರಾಜಮರ್ಯಾದೆಯ ಅಗತ್ಯವಿದೆಯೇ? ಇದರ ವಿರುದ್ಧ ಹೊರಾಡುವ ಶಕ್ತಿ ಇಲ್ಲದಿರುವುದು ನಮ್ಮ ಅಸಹಾಯಕತೆಯೇ?